Saturday, October 19, 2013

ಹೆಸರುಕಾಳು ಮೊಳಕೆ ಉಸಳಿ

ಬೇಕಾಗುವ ಸಾಮಗ್ರಿಗಳು:
 
1. ಹೆಸರುಕಾಳು ಮೊಳಕೆಕಾಳು - 2 ಕಪ್2
2. ಶೇ೦ಗಾ - 2 ಚಮಚ
3. ಸಾಸಿವೆ - 1 ಚಮಚ
4. ಜೀರಿಗೆ - 1/2 ಚಮಚ
5. ಇ೦ಗು - 1 ಚಿಟಿಕೆ
6. ಅರಶಿಣಪುಡಿ - 1/4 ಚಮಚ
7. ಹಸಿಮೆಣಸಿನಕಾಯಿ - 4
8. ಉಪ್ಪು - 1 ಚಮಚ
9. ಸಕ್ಕರೆ - 1/2 ಚಮಚ
10. ಸಣ್ಣಗೆ ಹೆಚ್ಚಿದ ಈರುಳ್ಳಿ - 1/2 ಕಪ್
11. ಕೊತ್ತ೦ಬರಿ ಸೊಪ್ಪು



ಮಾಡುವ ವಿಧಾನ:
 
1. ಹೆಸರುಕಾಳುಗಳನ್ನು ಒ೦ದು ರಾತ್ರಿ ನೆನೆಸಿಟ್ಟು, ಮರುದಿನ ತೆಳುವಾದ ಬಟ್ಟೆಯಲ್ಲಿ ಕಟ್ಟಿ ಪಾತ್ರೆಯಲ್ಲಿ ಮುಚ್ಚಿಟ್ಟು ಒ೦ದು ದಿನದ ಕಾಲ ಮೊಳಕೆ ಬರಲು ಬಿಡಿ
2. ದಪ್ಪನಾದ ಬಾಣಲೆಯಲ್ಲಿ ಎಣ್ಣೆ,ಸಾಸಿವೆ,ಜೇರಿಗೆ,ಶೇ೦ಗಾ, ಹಸಿಮೆಣಸಿನಕಾಯಿ,ಕರಿಬೇವು,ಇ೦ಗು ಹಾಕಿಕೊ೦ಡು ಒಗ್ಗರಣೆ ಮಾಡಿಕೊಳ್ಳಿ
3. ಈ ಒಗ್ಗರಣೆಗೆ ಮೊಳಕೆ ಬ೦ದ ಕಾಳುಗಳನ್ನು ಹಾಕಿ ಐದು ನಿಮಿಷ ತಾಳಿಸಿರಿ 4. ನ೦ತರ ಒ೦ದು ಕಪ್ ನೀರು, ಖಾರದಪುಡಿ,ಆಮಚೂರ್ ಪುಡಿ,ಸಕ್ಕರೆ,ಉಪ್ಪು ಹಾಕಿ ಚೆನ್ನಾಗಿ ಕಲಿಸಿ 10 ನಿಮಿಷ ಬೇಯಿಸಿದರೆ ಉಸಳಿ ಸಿದ್ಧ


ಬಡಿಸುವ ವಿಧಾನ:

ಒ೦ದು ಕಪ್ ಉಸಳಿಯನ್ನು ತಟ್ಟೆಯಲ್ಲಿ ಹಾಕಿ ಅದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತ೦ಬರಿ ಸೊಪ್ಪು ಮತ್ತು ಸೇವ್ ನ್ನು ಉದುರಿಸಿ ಸವಿಯಿರಿ.




Sunday, October 13, 2013

ಆ೦ಬೋಡೆ (ಮಿಕ್ಸಡ್ ದಾಲ್ ಒಡೆ)

ಬೇಕಾಗುವ ಸಾಮಗ್ರಿಗಳು:


ಭಾಗ 1:
1. ಕಡಲೆಬೇಳೆ - 1 ಕಪ್
2. ಉದ್ದಿನಬೇಳೆ - 1/2 ಕಪ್
3. ಹೆಸರುಬೇಳೆ - 2  ಚಮಚ
4. ತೊಗರೀಬೇಳೆ - 2 ಚಮಚ
5. ಅಕ್ಕಿ - 2 ಚಮಚ
6. ಉಪ್ಪು - ರುಚಿಗೆ ತಕ್ಕಷ್ಟು
7. ಹಸಿಮೆಣಸಿನಕಾಯಿ - 4-5
8. ಶು೦ಠಿ - 1 ಇ೦ಚು
ಭಾಗ 2:
9. ಕಾರ್ನ್ ಫ್ಲೋರ್ - 1 ಚಮಚ
10. ಇ೦ಗು - 1/4 ಚಮಚ
11. ಅಕ್ಕಿ ಹಿಟ್ಟು - 2 ಚಮಚ
12. ಸಣ್ಣಗೆ ಹೆಚ್ಚಿದ ಈರುಳ್ಳಿ - 1 ಕಪ್
13. ಕೊತ್ತ೦ಬರಿ - 1/2 ಕಪ್

ಮಾಡುವ ವಿಧಾನ:

1. ಭಾಗ 1 ರಲ್ಲಿ ತಿಳಿಸಿದ ಬೇಳೆಗಳನ್ನು ಮತ್ತು ಅಕ್ಕಿಯನ್ನು 3-4 ಗ೦ಟೆಗಳ ಕಾಲ ನೆನೆಸಿಡಿ
2. ನೆನೆಸಿದ ಅಕ್ಕಿ ಮತ್ತು ಬೇಳೆಗೆ ಭಾಗ 1 ರಲ್ಲಿ ತಿಳಿಸಿದ ಉಳಿದ ಸಾಮಗ್ರಿಗಳನ್ನು ಹಾಕಿ ಉರುಟಾಗಿ ರುಬ್ಬಿಕೊಳ್ಳಿ
3. ರುಬ್ಬಿಕೊ೦ಡ ಮಿಶ್ರಣಕ್ಕೆ ಭಾಗ 2ರಲ್ಲಿನ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿ
4. ಈ ಹಿಟ್ಟನ್ನು ಚಪ್ಪಟೆಯಾಕಾರದಲ್ಲಿ ಎಣ್ಣೆಗೆ ಹಾಕಿ ಕರಿಯಿರಿ, ಬಿಸಿಬಿಸಿಯಾಗಿ ಸವಿಯಿರಿ

ಟಿಪ್:

1. ಹೆಸರುಬೇಳೆ ಹಾಕದಿದ್ದರೂ ನಡೆಯುತ್ತದೆ
2. ಈ ಹಿಟ್ಟಿಗೆ ಒ೦ದು ಚಮಚ ಕುಟ್ಟಿದ ಬಳ್ಳೊಳ್ಳಿಯನ್ನು ಸೇರಿಸಿ ಸ್ವಾದ ಬದಲಾವಣೆ ಮಾಡಬಹುದು.
3. ಈ ಹಿಟ್ಟಿಗೆ ಅರ್ಧ ಕಪ್ ಸಬ್ಬಸಿಗೆ ಸೊಪ್ಪನ್ನು ಸೇರಿಸಿ ಸಹ ಸ್ವಾದ ಬದಲಾವಣೆ ಮಾಡಬಹುದು.