Sunday, October 13, 2013

ಆ೦ಬೋಡೆ (ಮಿಕ್ಸಡ್ ದಾಲ್ ಒಡೆ)

ಬೇಕಾಗುವ ಸಾಮಗ್ರಿಗಳು:


ಭಾಗ 1:
1. ಕಡಲೆಬೇಳೆ - 1 ಕಪ್
2. ಉದ್ದಿನಬೇಳೆ - 1/2 ಕಪ್
3. ಹೆಸರುಬೇಳೆ - 2  ಚಮಚ
4. ತೊಗರೀಬೇಳೆ - 2 ಚಮಚ
5. ಅಕ್ಕಿ - 2 ಚಮಚ
6. ಉಪ್ಪು - ರುಚಿಗೆ ತಕ್ಕಷ್ಟು
7. ಹಸಿಮೆಣಸಿನಕಾಯಿ - 4-5
8. ಶು೦ಠಿ - 1 ಇ೦ಚು
ಭಾಗ 2:
9. ಕಾರ್ನ್ ಫ್ಲೋರ್ - 1 ಚಮಚ
10. ಇ೦ಗು - 1/4 ಚಮಚ
11. ಅಕ್ಕಿ ಹಿಟ್ಟು - 2 ಚಮಚ
12. ಸಣ್ಣಗೆ ಹೆಚ್ಚಿದ ಈರುಳ್ಳಿ - 1 ಕಪ್
13. ಕೊತ್ತ೦ಬರಿ - 1/2 ಕಪ್

ಮಾಡುವ ವಿಧಾನ:

1. ಭಾಗ 1 ರಲ್ಲಿ ತಿಳಿಸಿದ ಬೇಳೆಗಳನ್ನು ಮತ್ತು ಅಕ್ಕಿಯನ್ನು 3-4 ಗ೦ಟೆಗಳ ಕಾಲ ನೆನೆಸಿಡಿ
2. ನೆನೆಸಿದ ಅಕ್ಕಿ ಮತ್ತು ಬೇಳೆಗೆ ಭಾಗ 1 ರಲ್ಲಿ ತಿಳಿಸಿದ ಉಳಿದ ಸಾಮಗ್ರಿಗಳನ್ನು ಹಾಕಿ ಉರುಟಾಗಿ ರುಬ್ಬಿಕೊಳ್ಳಿ
3. ರುಬ್ಬಿಕೊ೦ಡ ಮಿಶ್ರಣಕ್ಕೆ ಭಾಗ 2ರಲ್ಲಿನ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿ
4. ಈ ಹಿಟ್ಟನ್ನು ಚಪ್ಪಟೆಯಾಕಾರದಲ್ಲಿ ಎಣ್ಣೆಗೆ ಹಾಕಿ ಕರಿಯಿರಿ, ಬಿಸಿಬಿಸಿಯಾಗಿ ಸವಿಯಿರಿ

ಟಿಪ್:

1. ಹೆಸರುಬೇಳೆ ಹಾಕದಿದ್ದರೂ ನಡೆಯುತ್ತದೆ
2. ಈ ಹಿಟ್ಟಿಗೆ ಒ೦ದು ಚಮಚ ಕುಟ್ಟಿದ ಬಳ್ಳೊಳ್ಳಿಯನ್ನು ಸೇರಿಸಿ ಸ್ವಾದ ಬದಲಾವಣೆ ಮಾಡಬಹುದು.
3. ಈ ಹಿಟ್ಟಿಗೆ ಅರ್ಧ ಕಪ್ ಸಬ್ಬಸಿಗೆ ಸೊಪ್ಪನ್ನು ಸೇರಿಸಿ ಸಹ ಸ್ವಾದ ಬದಲಾವಣೆ ಮಾಡಬಹುದು.

No comments:

Post a Comment